ಕನ್ನಡದಲ್ಲಿ ವರ್ಷದ ಪ್ರತಿಯೊಂದು ಹುಣ್ಣಿಮೆಗೂ ಬೇರೆ ಬೇರೆ ಹೆಸರುಗಳಿವೆ. ಈ ಹೆಸರುಗಳು ಕನ್ನಡದ ಮನಸ್ಸು ಹುಣ್ಣಿಮೆಯನ್ನು ಯಾವ ಬಗೆಯ ಶ್ರೀಮಂತಿಕೆಯಲ್ಲಿ ಗ್ರಹಿಸಿಕೊಂಡಿದೆ ಅನ್ನುವುದನ್ನೂ ಸೂಚಿಸುವಂತಿದೆ.
ಜನವರಿ-ಬನದ ಹುಣ್ಣಿಮೆ
ಫೆಬ್ರವರಿ-ಭಾರತ ಹುಣ್ಣಿಮೆ
ಮಾರ್ಚ್-ಹೋಳಿ ಹುಣ್ಣಿಮೆ read more »
ಕನ್ನಡದಲ್ಲಿ ವರ್ಷದ ಪ್ರತಿಯೊಂದು ಹುಣ್ಣಿಮೆಗೂ ಬೇರೆ ಬೇರೆ ಹೆಸರುಗಳಿವೆ. ಈ ಹೆಸರುಗಳು ಕನ್ನಡದ ಮನಸ್ಸು ಹುಣ್ಣಿಮೆಯನ್ನು ಯಾವ ಬಗೆಯ ಶ್ರೀಮಂತಿಕೆಯಲ್ಲಿ ಗ್ರಹಿಸಿಕೊಂಡಿದೆ ಅನ್ನುವುದನ್ನೂ ಸೂಚಿಸುವಂತಿದೆ.
ಜನವರಿ-ಬನದ ಹುಣ್ಣಿಮೆ
ಫೆಬ್ರವರಿ-ಭಾರತ ಹುಣ್ಣಿಮೆ
ಮಾರ್ಚ್-ಹೋಳಿ ಹುಣ್ಣಿಮೆ read more »
ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ ಹೋಗಿದ್ದು. ಕುವೆಂಪು ತೀರಿಕೊಂಡರು ಅನ್ನುವ ಸುದ್ದಿ ತಿಳಿದ ದಿನ ಮತ್ತೆ ಆಮೇಲೆ ಹಲವು ದಿನ ನಿಷ್ಕಾರಣವಾಗಿಯೋ ಅನ್ನುವ ಹಾಗೆ ಮನಸ್ಸು ಮಂಕಾಗಿತ್ತು. ನನಗೇನು ಕುವೆಂಪು ಗೊತ್ತಿರಲಿಲ್ಲ. ಅವರ ಜೊತೆ ಮಾತಾಡಿದವನೂ ಅಲ್ಲ. ಆದರೂ ಅವರ ಕಾದಂಬರಿ ಓದಿ ನನ್ನದೇ ಆ ಲೋಕ ಅನ್ನುವ ಹಾಗೆ ಆ ಜನರನ್ನೂ, ಕಾಡನ್ನೂ, ಒಂಟಿ ಮನೆಗಳನ್ನೂ, ಕತ್ತಲು, ಸೂರ್ಯೋದಯ, ಸಂಜೆ, ಎಲ್ಲವನ್ನೂ ಒಳಗೇ ನಿರ್ಮಿಸಿಕೊಂಡಿದ್ದೆ. ಬೇರೆ ಯಾವ ಲೇಖಕರೂ ಹೀಗೆ ಒಂದು ಜಗತ್ತನ್ನೇ ನನಗೆ ಉಡುಗೊರೆಯಾಗಿ ಕೊಟ್ಟಿರಲಿಲ್ಲ. ಅಂಥ ಒಂದು ಜೀವ ಇಲ್ಲವಾಯಿತೇ ಎಂದು ಆಗ ಮಂಕಾಗಿದ್ದೆ ಅನ್ನಿಸುತ್ತದೆ. read more »
ಮಡಿ ಭಾಷೆ, ಮಡಿ ಭಾಷೆ
ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!
ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ ಹೌದು. ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ. ಸಂಸ್ಕೃತ. ಲ್ಯಾಟಿನ್, ಗ್ರೀಕ್ ಇತ್ಯಾದಿಗಳೆಲ್ಲ ತುಂಬ ಮಡಿವಂತ ಭಾಷೆಗಳಾದವು, ಆಯಾ ಭಾಷಾ ಪಂಡಿತರಿಂದ. ಹಾಗೆ ಅವರು ಮಡಿ ಮಾಡಿ ಮಾಡಿ ಇವತ್ತು ಅವು ಅಷ್ಟೇನೂ ಮಡಿಯಲ್ಲದ ಭಾಷೆಗಳಲ್ಲಿ ಮಾತ್ರ ಪದಗಳಾಗಿ ಉಳಿದುಕೊಂಡಿವೆ. read more »
೧
ಮಾಂದಳಿರ ತೋರಣ ಹೂಮಿಡಿ ಗುಡಿಗಟ್ಟಿ
ಮಧುಮಾಸ ಹೊರಟಿತ್ತು ನಿಬ್ಬಣಕೆ
ಚಂದಿರದೇವನಮುಗಿಲ ಮಂದಿರದಲ್ಲಿ
ಕಣ್ಣಿದಿರು ಕೌಮುದಿ ಕುಣಿಯುತಿರೆ
ಮಾವಿನ ಹೊಸ ಚಿಗುರು, ಹೊಸ ಹೂ, ಇವುಗಳ ಬಾವುಟ ಹಿಡಿದು (ಗುಡಿಗಟ್ಟಿ), ಮಧುಮಾಸದ ನಿಬ್ಬಣ ಹೊರಟಿದೆ. ಚಂದ್ರದೇವನಿಗೆ ಸೇರಿದ ಮೋಡಗಳ ಮಂದಿರದಲ್ಲಿ ಕೌಮುದಿಯ ನರ್ತನ ಸಾಗಿದೆ. ಸ್ವಲ್ಪ ಗಮನಿಸಿದರೆ ಈ ಸ್ಟಾಂಜಾದಲ್ಲಿ ಋತು ವೈಭವ, ಶೃಂಗಾರ ಮತ್ತು ದೈವೀಭಾವಗಳೆಲ್ಲ ಮೇಳೈಸಿರುವುದು ತಿಳಿಯುತ್ತದೆ. ಚಂದ್ರದೇವ, ಮಂದಿರ ಈ ಪದಗಳೊಡನೆ ಗುಡಿಗಟ್ಟಿ ಎಂಬುದು ಸುಂದರ ಪವಿತ್ರ ದೇವಾಲಯದ ಕಲ್ಪನೆ ಮೂಡಿಸೀತು. ಅದು ಮೋಡದ್ದಾದ್ದರಿಂದ ಹಾಗೆ ದೇಗುಲ ಅನ್ನಿಸುತ್ತಿರುವಾಗಲೇ ಹುಣ್ಣಿಮೆಯ ಬೆಳದಿಂಗಳಲ್ಲಿ ಕಾಣುವ ಹೂಬಿಟ್ಟ ಮಾಮರದ ಚಿತ್ರ ಮೂಡಿ ಆಹಾ ಸೌಂದರ್ಯವೇ ಅನಿಸೀತು. ಕೌಮುದಿ ಎಂಬುದು ಆಶ್ವಯುಜದ ಅಥವ ಕಾರ್ತಿಕದ ಹುಣ್ಣಿಮೆಯ ದಿನ. ಕೌಮುದೀ ಮಹೋತ್ಸವಗಳ ಬಗ್ಗೆ ಹಳೆಯ ಕವಿಗಳು ಹೇಳಿರುವ ಮಾತುಗಳೂ ನೆನಪಿಗೆ ಬಂದು ಸ್ವಂಚ್ಛಂದ ಶೃಂಗಾರದ ಭಾವವೂ ಹೊಳೆದೀತು. ಸುಸ್ಥಿರವೆನ್ನಿಸುವ ಪದ್ಯ ಬಂಧದೊಳಗೆ ಮೋಡದಂಥ ಕ್ಷಣಕ್ಕೊಂದು ಮೂಡುವ ಭಾವಗಳ ಅಚ್ಚರಿ ಇಲ್ಲಿದೆ. read more »
ಬೇಂದ್ರೆಯವರ ಸಖೀ ಗೀತ ಕನ್ನಡದ ಅತ್ಯುತ್ತಮ ಕವಿತೆಗಳಲ್ಲಿ ಒಂದು. ಇದರಲ್ಲಿ ನಲವತ್ತು ಭಾಗಗಳಿವೆ. ಒಂದೊಂದು ಭಾಗದಲ್ಲೂ ಆರು ಸ್ಟಾಂಜಾಗಳಿವೆ. ಗಂಭೀರವಾದ ಕಾವ್ಯಾಸಕ್ತರಿಗೆ ಇಷ್ಟವಾಗಬಹುದೆಂದು ಇತ್ತೀಚೆಗೆ ಅದನ್ನು ನಾನು ಓದಿಕೊಂಡ ರೀತಿಯನ್ನು ವಿವರಿಸುವ ಪ್ರಯತ್ನ ಮಾಡಿದ್ದೇನೆ. ಇಲ್ಲಿ ಮೊದಲನೆಯ ಭಾಗ ಕುರಿತ ವ್ಯಾಖ್ಯಾನ ಇದೆ. ನಿಮ್ಮ ಮನಸ್ಸಿನ ನುಡಿಗಳು ಉಳಿದ ಭಾಗವನ್ನೂ ಹೀಗೇ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟಾವು. read more »
ಮೊದಲು ಸುಪ್ರಸಿದ್ಧವಾದ ಈ ಪ್ರಾರ್ಥನಾ ಶ್ಲೋಕವನ್ನು ನೋಡಿ:
ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ
ಇದು ಕನ್ನಡದಲ್ಲಿ ಹೊಸ ಹುಟ್ಟು ಪಡೆದಿರುವ ಬಗೆಯನ್ನು ನೋಡಿ:
ಕೂಡಿ ಓದಿ, ಕೂಡಾಡಿ, ಕೂಡಿ
ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು, ಕೂಡುಂಡು ಕುಡಿದು read more »
ಈ ಕವಿತೆಯನ್ನು ನೋಡಿ. ಬೇಂದ್ರೆಯವರು ೧೯೩೭ರಲ್ಲಿ ಪ್ರಕಟಿಸಿದ್ದು. ಸಖೀಗೀತದಲ್ಲಿದೆ. ಇದನ್ನು ಯುವ ಕವಿಗಳ ಕವನಸಂಕಲನಕ್ಕೆ ಮುನ್ನುಡಿಯಾಗಿ ಬರೆದದ್ದು ಎಂದು ಎಲ್ಲೋ ಓದಿದ ನೆನಪು.
ಬಾ ಭೃಂಗವೆ ಬಾ, ವಿರಾಗಿಯಂದದಿ
ಭ್ರಮಿಸುವೆ ನೀನೇಕೇ?
ಕಂಪಿನ ಕರೆಯಿದು ಸರಾಗವಾಗಿರೆ
ಬೇರೆಯ ಕರೆ ಬೇಕೇ? read more »
ನಮಸ್ಕಾರ. ಬಹುಶಃ ಕೆಲವು ತಿಂಗಳಿಂದ ನಾನು ಏನೂ ಬರೆದಿಲ್ಲ. ಈಗ ಮತ್ತೆ ಬರೆಯುವ ಮನಸ್ಸು ಬಂದಿದೆ. ಗೆಳೆಯ ನಾಡಿಗ್ ಅವರು ನನ್ನದೇ ಹೆಸರಿನ ಬ್ಲಾಗ್ ತೆರೆದುಕೊಟ್ಟು ಉಪಕಾರ ಮಾಡಿದ್ದಾರೆ. ಅವರಿಗೆ ಕೃತಜ್ಞ. ಇನ್ನು ಮೇಲೆ ನನ್ನ ದೊಡ್ಡ ಪ್ರಮಾಣದ ಬರವಣಿಗೆಗಳೆಲ್ಲ ಇಲ್ಲಿಯೇ ನಿಮ್ಮೆದುರು ಕಾಣಿಸಿಕೊಳ್ಳುತ್ತವೆ. ಸಾಧ್ಯವಾದಾಗ ಒಂದಷ್ಟು ಫೋಟೋಗಳು ಕೂಡ. read more »
Recent comments
31 weeks 5 days ago
1 year 4 weeks ago
1 year 36 weeks ago
1 year 38 weeks ago
1 year 50 weeks ago